ಅನ್ನದಿಂದ ಚಿತ್ರನ್ನ, ಪಲಾವ್, ಬಿಸಿಬೆಳೆ ಬಾತ್ ಈ ರೀತಿಯ ತಿಂಡಿಗಳಷ್ಟೇ ಅಲ್ಲದೆ ಪಕೋಡವನ್ನು ಸಹ ಮಾಡಬಹುದು.
ಅನ್ನದ ಪಕೋಡ ಮಾಡಲು ಬೇಕಾಗುವ ಸಾಮಾಗ್ರಿಗಳು:
- ಅನ್ನ 2 ಕಪ್
- ಕಡಲೆ ಹಿಟ್ಟು ಅರ್ಧ ಕಪ್
- ಸಣ್ಣಗೆ ಹೆಚ್ಚಿದ ಈರುಳ್ಳಿ 2
- ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ 4
- ಸಣ್ಣಗೆ ಹೆಚ್ಚಿದ ಶುಂಠಿ 1 ಚಮಚ
- ಎಣ್ಣೆ 2 ಕಪ್
- ಚಾಟ್ ಮಸಾಲ 1 ಚಮಚ
- ಸಣ್ಣಗೆ ಹೆಚ್ಚಿದ ಪುದೀನಾ ಎಲೆಗಳು ಕಾಲು ಕಪ್
- ರುಚಿಗೆ ತಕ್ಕಷ್ಟು ಉಪ್ಪು
ಅನ್ನದ ಪಕೋಡ ಮಾಡುವ ವಿಧಾನ:
- ಒಂದು ಬೌಲ್‌ಗೆ ಅನ್ನ, ಈರುಳ್ಳಿ, ಶುಂಠಿ, ಪುದೀನಾ, ಹಸಿಮೆಣಸಿನಕಾಯಿ ಹಾಕಿ ಕಲಸಿದ ನಂತರ ಈ ಮಿಶ್ರಣಕ್ಕೆ ಕಡಲೆ ಹಿಟ್ಟು, ಚಾಟ್ ಮಸಾಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು.
- ನಂತರ ಒಂದು ಪಾನ್‌ಗೆ 2 ಕಪ್ ಎಣ್ಣೆ ಹಾಕಿ ಅದು ಕಾದ ನಂತರ ಈಗಾಗಲೇ ಮಾಡಿಟ್ಟುಕೊಂಡಿರುವ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಎಣ್ಣೆಗೆ ಬಿಡಬೇಕು.
- ಈ ಉಂಡೆಗಳು ಕಂದು ಬಣ್ಣಕ್ಕೆ ಬರುವವರೆಗೂ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿದರೆ ಅನ್ನದ ಪಕೋಡ ತಯಾರಾಗುತ್ತದೆ.