Sunday, June 8, 2025

ವಧುವಿನೊಂದಿಗೆ ಫೋಟೊ ತೆಗೆಸಿಕೊಳ್ಳಲು ಬಂದ ಕಳ್ಳ; ನಗದು ಆಭರಣವಿದ್ದ ಬ್ಯಾಗ್ ನೊಂದಿಗೆ ಪರಾರಿ

ಗ್ವಾಲಿಯರ್: ಕೊರೋನಾ ಸೋಂಕನ್ನು ತಡೆಗಟ್ಟುವ ಸಲುವಾಗಿ ನಾವು ಮಾಸ್ಕ್ ಬಳಸುತ್ತೇವೆ. ಆದರೆ ಕೆಲ ಕಳ್ಳರು ಅದನ್ನು ಹೇಗೆಲ್ಲಾ ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಶನಿವಾರ ನಡೆದ ಘಟನೆ ಸಾಕ್ಷಿಯಾಗಿದೆ.

ಮಾಸ್ಕ್ ಧರಿಸಿ ಮದುವೆ ಮನೆಗೆ ಬಂದ ಕಳ್ಳ ತೀರಾ ಆತ್ಮೀಯನಂತೆ ನಟಿಸುತ್ತಾ ವಧುವಿನ ಪಕ್ಕದಲ್ಲಿ ನಿಂತು ಫೋಟೊ ತೆಗೆಸಿಕೊಂಡಿದ್ದಾನೆ. ಆ ವೇಳೆ ವಧುವಿನ ಪಕ್ಕ ಇದ್ದ ಬ್ಯಾಗ್ ಫೋಟೊ ತೆಗೆಸಿಕೊಳ್ಳಲು ಅಡ್ಡಿಯಾಗುತ್ತದೆ ಎನ್ನುವಂತೆ ನಟಿಸಿ ಬ್ಯಾಗ್ ಅನ್ನು ಎತ್ತಿ ವಧುವಿನ ಕುರ್ಚಿಯ ಹಿಂದಿಟ್ಟಿದ್ದಾನೆ. ಫೋಟೊ ಎಲ್ಲಾ ತೆಗೆಸಿಕೊಂಡ ನಂತರ ಆ 1ಲಕ್ಷ ರೂ. ನಗದು ಹಾಗೂ 2.ಲಕ್ಷ ರೂ ಮೌಲ್ಯದ ಆಭರಣವಿರುವ ಬ್ಯಾಗ್ ಅನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.

ಪೊಲೀಸರು ಆ ಕಳ್ಳನನ್ನು ಹಿಡಿಯಲು ಪರದಾಡುತ್ತಿದ್ದು, ಕಳೆದ 15 ದಿನಗಳಲ್ಲಿ ಗ್ವಾಲಿಯರ್ ನಲ್ಲಿ ನಡೆದ ಈ ರೀತಿಯ ಮೂರನೇ ಪ್ರಕರಣ ಇದಾಗಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles