ಕ್ರಿಸಿಲ್ ಎಂಬ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ಭಾರತದಲ್ಲಿ ಸುಮಾರು 16 ಕೋಟಿ ಜನರು ಮದ್ಯ ಸೇವಿಸುತ್ತಿದ್ದು, ಇದರಲ್ಲಿ ಶೇಕಡ 95ರಷ್ಟು ಪುರುಷರು ಹಾಗೂ ಶೇಕಡ 5ರಷ್ಟು 18 ರಿಂದ 49 ವರ್ಷದ ಮಹಿಳೆಯರು ಸೇವಿಸುತ್ತಿದ್ದಾರೆ. ದೇಶದಲ್ಲಿ ಪ್ರತಿ ವರ್ಷವೂ ಬಿಲಿಯನ್ ಲೀಟರ್ ವೈನ್ ಮಾರಾಟವಾಗುತ್ತಿದೆ.
ಕ್ರಿಸಿಲ್ ಸಂಸ್ಥೆ ವರದಿಯ ಪ್ರಕಾರ 2021ರಲ್ಲಿ ಭಾರತದ ಈ ಐದು ರಾಜ್ಯಗಳ ಜನರು ದೇಶದಲ್ಲಿ ಮಾರಾಟವಾಗುತ್ತಿರುವ ಶೇ.45ರಷ್ಟು ಮದ್ಯವನ್ನು ಸೇವಿಸುತ್ತಿದ್ದಾರೆ. ಆ ಐದು ರಾಜ್ಯಗಳ ಪಟ್ಟಿ ಹೀಗಿದೆ:
- ಛತ್ತೀಸ್‌ಗಢ: ಅತಿ ಹೆಚ್ಚು ಮದ್ಯ ಸೇವಿಸುವ ರಾಜ್ಯಗಳ ಪಟ್ಟಿಯಲ್ಲಿ ಛತ್ತೀಸ್‌ಗಢ ಮೊದಲ ಸ್ಥಾನ ಪಡೆದಿದೆ. ರಾಜ್ಯದ ಶೇ.37.7 ಜನರು ಮದ್ಯ ಸೇವಿಸುತ್ತಾರೆ.
- ತ್ರಿಪುರಾ: ಅತಿ ಹೆಚ್ಚು ಮದ್ಯ ಸೇವಿಸುವ ರಾಜ್ಯಗಳ ಪಟ್ಟಿಯಲ್ಲಿ ತ್ರಿಪುರಾ ಎರಡನೇ ಸ್ಥಾನ ಪಡೆದಿದ್ದು, ರಾಜ್ಯದ ಶೇ.34.7 ರಷ್ಟು ಜನರು ಮದ್ಯ ಸೇವಿಸುತ್ತಾರೆ. ಶೇ.13.7 ರಷ್ಟು ಜನರು ನಿಯಮಿತವಾಗಿ ಮದ್ಯ ಸೇವಿಸುತ್ತಾರೆ.
- ಆಂಧ್ರಪ್ರದೇಶ: ಅತಿ ಹೆಚ್ಚು ಮದ್ಯ ಸೇವಿಸುವ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರಪ್ರದೇಶ ಮೂರನೇ ಸ್ಥಾನ ಪಡೆದಿದ್ದು, ಇಲ್ಲಿನ ಶೇ.34.5 ರಷ್ಟು ಜನರು ನಿಯಮಿತವಾಗಿ ಮದ್ಯ ಸೇವಿಸುತ್ತಾರೆ.
- ಪಂಜಾಬ್: ಮದ್ಯ ಸೇವನೆಯ ಪಟ್ಟಿಯಲ್ಲಿ ಪಂಜಾಬ್ ನಾಲ್ಕನೇ ಸ್ಥಾನ ಪಡೆದಿದ್ದು, ರಾಜ್ಯದ ಶೇ.28.5 ರಷ್ಟು ಜನರು ಮದ್ಯ ಸೇವಿಸುತ್ತಾರೆ.
- ಅರುಣಾಚಲ ಪ್ರದೇಶ: ಕ್ರಿಸಿಲ್ ಸಂಸ್ಥೆಯ ವರದಿಯ ಪ್ರಕಾರ ಅರುಣಾಚಲ ಪ್ರದೇಶ ಐದನೇ ಸ್ಥಾನ ಪಡೆದಿದ್ದು, ರಾಜ್ಯದ ಶೇ.28ರಷ್ಟು ಜನರು ಮದ್ಯ ಸೇವಿಸುತ್ತಾರೆ.