ವಿಟ್ಲ: ಕಳ್ಳರಿಬ್ಬರು ಮಹಿಳೆಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಚಿನ್ನಾಭರಣ ದೋಚಿ ಪರಾರಿ ಆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಅಡ್ಡದ ಬೀದಿಯಲ್ಲಿ ನಡೆದಿದೆ.
ಸುಲೈಮಾನ್ ಅವರ ಪತ್ನಿ ಭೀಪಾತುಮ್ಮ ಹಲ್ಲೆಗೊಳಗಾದ ಮಹಿಳೆ. ಕರೆಂಟ್ ಬಿಲ್ ಕೊಡುವ ನೆಪದಲ್ಲಿ ಮನೆಗೆ ಬಂದು ಮಹಿಳೆಯ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಸುಲೈಮಾನ್ ಅಡ್ಡಿದ ಬೀದಿಯಲ್ಲಿ ಎಳನೀರು ವ್ಯಾಪಾರಿಯಾಗಿದ್ದು, ಅವರು ಮಧ್ಯಾಹ್ನ ಮನೆಗೆ ಬಂದು ಹಿಂತಿರುಗಿದ್ದಾರೆ. ಮನೆಯಲ್ಲಿ ಮಹಿಳೆಯೊಬ್ಬರೇ ಇರುವುದನ್ನು ಗಮನಿಸಿದ ಕಳ್ಳರು ಈ ಕೃತ್ಯ ಎಸಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.