Saturday, June 7, 2025

ಅತಿಯಾಗಿ ಅರಶಿನ ಬಳಸುವ ಮುನ್ನ ಯೋಚಿಸಿ!

ಮಸಾಲೆ ಪದಾರ್ಥಗಳಲ್ಲಿ ಅರಿಶಿಣ ಕೂಡ ಒಂದಾಗಿದೆ. ಅರಶಿನವು ಅನೇಕ ಬ್ಯಾಕ್ಟೀರಿಯಾಗಳ ವಿರೋದ್ಧ ಹೋರಾಡುವ ಗುಣವಿದೆ. ಅಡುಗೆಯಲ್ಲಿ ಅರಶಿನವನ್ನು ಬಳಸುವುದರಿಂದ ಇದು ನಮ್ಮನ್ನು ಅನೇಕ ರೋಗಗಳಿಂದ ದೂರವಿಡುತ್ತವೆ. ಅರಶಿನದಲ್ಲಿ ಆಂಟಿಸೆಪ್ಟಿಕ್ ಜೊತೆಗೆ ಅರಿಶಿಣವು ಕ್ಯಾಲ್ಸಿಯಂ, ವಿಟಮಿನ್ ಇ, ವಿಟಮಿನ್ ಸಿ, ಕಬ್ಬಿಣ, ಪ್ರೋಟೀನ್ ಮತ್ತು ಫೈಬರ್‌ನಂತಹ ಅನೇಕ ಗುಣಗಳಿವೆ. ಅನೇಕ ಆರೋಗ್ಯಕರವಾದ ಗುಣಗಳನ್ನು ಹೊಂದಿದ್ದರೂ ಇದನ್ನು ಅತಿಯಾಗಿ ಬಳಸಿದಲ್ಲಿ ದೇಹಕ್ಕೆ ಹಾನಿಯುಂಟುಮಾಡುತ್ತದೆ. ಆದ್ದರಿಂದ ಅರಶಿನವನ್ನು ಮಿತಿಯಲ್ಲಿ ಬಳಸುವುದು ಉತ್ತಮ.

  • ಹೊಟ್ಟೆಯಲ್ಲಿ ಹಾಗೂ ಕಿಡ್ನಿಯಲ್ಲಿ ಕಲ್ಲಿರುವವರು, ಹಾಗೂ ಆಗಾಗ ಕಲ್ಲಾಗುವ ಸಮಸ್ಯೆ ಇರುವವರು ಅರಶಿನವನ್ನು ಮಿತಿಯಾಗಿ ಸೇವಿಸಬೇಕು. ಹೆಚ್ಚಾಗಿ ಸೇವಿಸಿದಲ್ಲಿ ಕಲ್ಲಿನ ಸಮಸ್ಯೆ ಹೆಚ್ಚಾಗುತ್ತದೆ. ವೈದ್ಯರ ಸಲಹೆಯ ಮೇರೆಗೆ ಅರಿಶಿಣವನ್ನು ಸೇವಿಸುವುದು ಉತ್ತಮ.
  • ಮಿತಿಯಾಗಿ ಅರಿಶಿಣವನ್ನು ಸೇವಿಸದೇ ಹೋದಲ್ಲಿ ಇದರಿಂದ ಚರ್ಮದ ಸಮಸ್ಯೆಗಳು ದೇಹದಲ್ಲಿ ಕಾಣಿಸಿಕೊಳ್ಳಬಹುದು. ಅರಿಶಿಣದ ಅತಿಯಾದ ಸೇವಿಸಿದರೆ ಚರ್ಮದಲ್ಲಿ ದದ್ದುಗಳಂತಹ ಸಮಸ್ಯೆಗೆ ಕಾರಣವಾಗುತ್ತದೆ. ಚರ್ಮಕ್ಕೆ ಅರಿಶಿಣವು ವಿಧ ವಿಧವಾದ ಪ್ರಯೋಜನಗಳನ್ನು ನೀಡುತ್ತದೆ. ಆದರೂ ಅಲರ್ಜಿ ಸಮಸ್ಯೆ ಇರುವಂತವರು ಅರಿಶಿಣವನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬೇಕು.
  • ಅರಿಶಿಣವನ್ನು ದೇಹದ ಅಗತ್ಯಕ್ಕಿಂತ ಹೆಚ್ಚಾಗಿ ಸೇವಿಸಿದರೆ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಹೆಚ್ಚು ಅರಶಿನವನ್ನು ಬಳಸುವುದರಿಂದ ಹೊಟ್ಟೆ ಉರಿ, ಅತಿಸಾರ, ಹೊಟ್ಟೆಯಲ್ಲಿ ಊತ ಅಥವಾ ಸೆಳೆತದಂತಹ ಸಮಸ್ಯೆಗಳು ಉಂಟಾಗುತ್ತದೆ.
  • ಕಾಮಾಲೆಯಂತಹ ಗಂಭೀರ ಕಾಯಿಲೆಯಿರುವವರು ಅರಿಶಿಣವನ್ನು ಬಳಸಬಾರದು. ಇದರಿಂದ ಕಾಯಿಲೆಯು ಉಲ್ಬಣವಾಗುವ ಸಾಧ್ಯತೆ ಹೆಚ್ಚು.
  • ಮೂಗಿನಲ್ಲಿ ರಕ್ತಸ್ರಾವ ಆಗುವಂತಹ ಸಮಸ್ಯೆ ಉಳ್ಳವರು ಅರಿಶಿಣವನ್ನು ಹೆಚ್ಚಾಗಿ ಸೇವಿಸಬಾರದು. ಇದರ ಪರಿಣಾಮವು ಉಷ್ಣಾಂಶದಿಂದ ಕೂಡಿದ್ದು, ಇದು ಮೂಗಿನಲ್ಲಿ ರಕ್ತಸ್ರಾವವಾಗುವುದಕ್ಕೆ ಕಾರಣವಾಗುತ್ತದೆ.
Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles