Saturday, June 7, 2025

ದೇಶದಲ್ಲಿ ಒಮಿಕ್ರಾನ್ ನಿಂದಾಗಿ ಮೊದಲ ಸಾವು

ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಕಳೆದ ವಾರ 74 ವರ್ಷದ ವ್ಯಕ್ತಿಯೊಬ್ಬರು ನಿಧನರಾಗಿದ್ದರು. ಇವರು ಉದಯ್‌ಪುರದ ಮಹಾರಾಣಾ ಭೂಪಾಲ್ ಆಸ್ಪತ್ರೆಗೆ ಡಿಸೆಂಬರ್ 15 ರಂದು ದಾಖಲಾಗಿದ್ದರು. ಡಿಸೆಂಬರ್ 31 ರಂದು ಈ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಒಮಿಕ್ರಾನ್ ನಿಂದ ಮೊದಲ ಸಾವು ಉಂಟಾಗಿದೆ.

‘ತಾಂತ್ರಿಕವಾಗಿ ಇದು ಓಮಿಕ್ರಾನ್ ಸಂಬಂಧಿತ ಸಾವು. ಅವರು ಮಧುಮೇಹ ಮತ್ತು ಕೊಮೊರ್ಬಿಡ್ ಪರಿಸ್ಥಿತಿಗಳನ್ನು ಹೊಂದಿದ್ದರು. ಬುಧವಾರದಂದು ಆ ವ್ಯಕ್ತಿಗೆ ಒಮಿಕ್ರಾನ್-ಪಾಸಿಟಿವ್ ಎಂದು ದೃಢಪಟ್ಟಿದೆ. ಅಸ್ತಿತ್ವದಲ್ಲಿರುವ ಕೊಮೊರ್ಬಿಡಿಟಿಗಳನ್ನು ಸೇರಿದಂತೆ ಅವರ ಚಿಕಿತ್ಸೆಯು ಪ್ರೋಟೋಕಾಲ್ ಪ್ರಕಾರವೇ ನಡೆಯುತ್ತಿತ್ತು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಪ್ರೀತಿ ಅಗರ್ವಾಲ್ ಹೇಳಿದರು.

ಒಮಿಕ್ರಾನ್ ನಿಂದ ಸಾವನ್ನಪ್ಪಿದ ವ್ಯಕ್ತಿ ಎರಡೂ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಈ ವ್ಯಕ್ತಿಯನ್ನು ಡಿಸೆಂಬರ್ 14 ರಂದು ಕೋವಿಡ್ ಟೆಸ್ಟ್ ಮಾಡಲಾಯಿತು. ಇವರು ಜ್ವರ, ನೆಗಡಿ ಮತ್ತು ಕೆಮ್ಮಿನ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಉದಯಪುರದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ದಿನೇಶ್ ಖರಾಡಿ ಹೇಳಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles