Saturday, June 7, 2025

ರಷ್ಯಾದಲ್ಲಿ ಟಿಕ್‌ ಟಾಕ್‌ ಲೈವ್‌ ಸ್ಟ್ರೀಮಿಂಗ್ ಸ್ಥಗಿತ..!

ರಷ್ಯಾದ ಹೊಸ ‘ನಕಲಿ ಸುದ್ದಿ’ ತಡೆ ಕಾನೂನಿನ ಅನುಸಾರ ಟಿಕ್‌ಟಾಕ್ ರಷ್ಯಾದಲ್ಲಿ ಹೊಸ ಕಂಟೆಂಟ್ ಮತ್ತು ಲೈವ್‌ ಸ್ಟ್ರೀಮಿಂಗ್ ಮಾಡುವ ಅವಕಾಶವನ್ನು ಸ್ಥಗಿತಗೊಳಿಸಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇತ್ತೀಚೆಗೆ ನಕಲಿ ಸುದ್ದಿ ತಡೆ ಕಾನೂನಿಗೆ ಸಿಹಿ ಮಾಡಿದ್ದರು. ಉಕ್ರೇನ್ ಮೇಲೆ ಯುದ್ಧ ಸಾರಿದ ಹಿನ್ನೆಲೆಯಲ್ಲಿ ನಕಲಿ ಸುದ್ದಿ ಪ್ರಕಟ ಮಾಡಿದರೆ 15 ವರ್ಷ ಜೈಲು ಶಿಕ್ಷೆ ಪರಿಚಯಿಸುವ ಮಸೂದೆಯನ್ನು ಮುಂದೂಡಿತ್ತು.

‘ರಷ್ಯಾದ ಹೊಸ ನಕಲಿ ಸುದ್ದಿ ಕಾನೂನಿನ ಅಡಿಯಲ್ಲಿ, ನಾವು ಈ ಕಾನೂನಿನ ಸುರಕ್ಷತೆಯ ಪರಿಣಾಮಗಳನ್ನು ಪರಿಶೀಲಿಸುವಾಗ ನಮ್ಮ ವೀಡಿಯೊ ಸೇವೆಯ ಲೈವ್‌ ಸ್ಟ್ರೀಮಿಂಗ್ ಮತ್ತು ಹೊಸ ಕಂಟೆಂಟ್ ಅನ್ನು ಸ್ಥಗಿತಗೊಳಿಸುವುದು ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ. ಇದರಿಂದ ನಮ್ಮ ಅಪ್ಲಿಕೇಶನ್‌ನಲ್ಲಿನ ಸಂದೇಶ ಕಳುಹಿಸುವಿಕೆಯ ಸೇವೆಗೆ ಪರಿಣಾಮ ಬೀರುವುದಿಲ್ಲ’ ಎಂದು ಟಿಕ್ ಟಾಕ್ ಕಂಪನಿ ಟ್ವೀಟ್‌ ಮಾಡಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles