ಸಂಜೆ ವೇಳೆಯಲ್ಲಿ ಒಂದೇ ರೀತಿಯ ತಿಂಡಿ ಅಥವಾ ಚಾಟ್ಸ್ ಅನ್ನು ಮಾಡಿ ಬೇಸರವಾಗಿದ್ದವರು ಈ ರೀತಿಯಾದ ವಿಭಿನ್ನ ರುಚಿಯನ್ನು ಪ್ರಯತ್ನಿಸಬಹುದು.
ಮಶ್ರೂಮ್ ಪೆಪ್ಪರ್ ಫ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು:
*ಕಾಳುಮೆಣಸು 1 ಚಮಚ
*ಸೋಂಪು ಅರ್ಧ ಚಮಚ
*ಜೀರಿಗೆ ಅರ್ಧ ಚಮಚ
*ಕೊತ್ತಂಬರಿ ಅರ್ಧ ಚಮಚ
*ತುಪ್ಪ 2 ಚಮಚ
*ಸಾಸಿವೆ 1 ಚಮಚ
*ಒಣಮೆಣಸಿನಕಾಯಿ 2
*ಕರಿಬೇವಿನ ಎಲೆಗಳು 10
*ಸಣ್ಣಗೆ ಹೆಚ್ಚಿದ ಶುಂಠಿ 1 ಚಮಚ
*ಉದ್ದಕ್ಕೆ ಹೆಚ್ಚಿದ ಈರುಳ್ಳಿ ಅರ್ಧ ಚಮಚ
*ಮಶ್ರೂಮ್ (ಅಣಬೆ) 300 ಗ್ರಾಂ
*ಉದ್ದಕ್ಕೆ ಹೆಚ್ಚಿದ ದೊಣ್ಣೆ ಮೆಣಸಿನಕಾಯಿ ಅರ್ಧ ಕಪ್
*ರುಚಿಗೆ ತಕ್ಕಷ್ಟು ಉಪ್ಪು
ಮಶ್ರೂಮ್ ಪೆಪ್ಪರ್ ಫ್ರೈ ಮಾಡುವ ವಿಧಾನ:
ಮೊದಲಿಗೆ ಒಂದು ಮಿಕ್ಸಿ ಜಾರ್ ಗೆ ಕಾಳುಮೆಣಸು 1 ಚಮಚ, ಸೋಂಪು ಅರ್ಧ ಚಮಚ, ಜೀರಿಗೆ ಅರ್ಧ ಚಮಚ ಮತ್ತು ಕೊತ್ತಂಬರಿ ಅರ್ಧ ಚಮಚ ಹಾಕಿ ನುಣ್ಣಗೆ ನೀರು ಹಾಕದೆ ಪುಡಿ ಮಾಡಿಕೊಳ್ಳಿ.
ನಂತರ ಒಂದು ಪಾನ್ ಗೆ 2 ಚಮಚ ತುಪ್ಪ ಹಾಕಿ ಅದು ಬಿಸಿ ಆದ ನಂತರ ಅದಕ್ಕೆ 1 ಚಮಚ ಸಾಸಿವೆ ಹಾಕಿ ಅದು ಸಿಡಿದ ನಂತರ ಅದಕ್ಕೆ 2 ಒಣಮೆಣಸಿನ ಕಾಯಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಪಾನ್ ಗೆ ಹಾಕಿ ಅದು ಬಿಸಿ ಆದ ನಂತರ ಅದಕ್ಕೆ ಕರಿಬೇವಿನ ಎಲೆಗಳು 10 ಹಾಕಿ ಚೆನ್ನಾಗಿ ಹುರಿಯಿರಿ.
ನಂತರ ಪಾನ್ ಗೆ ಸಣ್ಣಗೆ ಹೆಚ್ಚಿದ ಶುಂಠಿ 1 ಚಮಚ, ಉದ್ದಕ್ಕೆ ಹೆಚ್ಚಿದ ಈರುಳ್ಳಿ ಅರ್ಧ ಚಮಚ ಹಾಕಿ ಕೆಂಪಾಗುವವರೆಗೆ ಹುರಿಯಿರಿ. ನಂತರ ಪಾನ್ ಗೆ ಮಶ್ರೂಮ್ (ಅಣಬೆ) 300 ಗ್ರಾಂ ಹಾಕಿ ಚೆನ್ನಾಗಿ ಬಾಡಿಸಿಕೊಂಡು ಇದಕ್ಕೆ ಉದ್ದಕ್ಕೆ ಹೆಚ್ಚಿದ ಅರ್ಧ ಕಪ್ ದೊಣ್ಣೆಮೆಣಸಿನ ಕಾಯಿ ಹಾಕಿ ಹುರಿದುಕೊಳ್ಳಿ.
ನಂತರ ಪಾನ್ ಗೆ ಈ ಮೊದಲೇ ಪುಡಿ ಮಾಡಿಟ್ಟುಕೊಂಡಿರುವ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ರುಚಿ ರುಚಿಯಾದ ಮಶ್ರೂಮ್ ಪೆಪ್ಪರ್ ಫ್ರೈ ತಯಾರಾಗುತ್ತದೆ.