ಟೋಕಿಯೊ: ಜಪಾನ್ ಒಂದಲ್ಲ ಒಂದು ಹೊಸ ತಂತ್ರಜ್ಞಾನವನ್ನು ಕಂಡುಹಿಡಿದು ಪ್ರಪಂಚಕ್ಕೆ ಪರಿಚಯ ಮಾಡುತ್ತಾ ಬಂದಿದೆ.
ನಾವು ಪರದೆಗಳ ಮೇಲೆ ಆಹಾರಪದಾರ್ಥಗಳ ವೀಡಿಯೊ ಫೋಟೋಗಳನ್ನು ನೋಡಬಹುದಾಗಿತ್ತು. ಆದರೆ ಅದರಲ್ಲಿರುವ ಆಹಾರಪದಾರ್ಥಗಳ ರುಚಿಯನ್ನು ತಿಳಿಯಲು ಸಾ ವಿರಲಿಲ್ಲ. ಆದರೆ ಜಪಾನ್ ಪರದಯ ಮೇಲಿಂದ ರುಚಿಯನ್ನೂ ನೋಡಬಹುದಾದ ಟಿವಿಯನ್ನು ಅಭಿವೃದ್ಧಿಪಡಿಸಿದೆ.
ಜಪಾನ್ ನೆಕ್ಕಬಹುದಾದ ಟಿವಿ ಪರದೆಯನ್ನು ಅಭಿವೃದ್ಧಿಪಡಿಸಿದೆ. ಟಿವಿ ಪರದೆಯ ಮೇಲೆ ವಿಧ ವಿಧವಾದ ಆಹಾರದ ರುಚಿಗಳನ್ನು ಆಸ್ವಾದಿಸಬಹುದಾಗಿದೆ. ಈ ತಂತ್ರಜ್ಞಾನವನ್ನು ಟೇಸ್ಟ್ ಟಿವಿ (ಟಿಟಿಟಿವಿ) ಎಂದು ಹೇಳಲಾಗುತ್ತಿದೆ. 10 ಫ್ಲೇವರ್ ಡಬ್ಬಿಗಳನ್ನು ಒಂದು ನಿರ್ದಿಷ್ಟ ಆಹಾರದ ರುಚಿ ನೀಡುವುದಕ್ಕಾಗಿ ಬಳಸಲಾಗುತ್ತದೆ. ನಂತರ ಇದು ಟಿವಿ ಪರದೆಯ ಮೇಲೆ ಮೂಡಲಿದ್ದು ಬಳಕೆದಾರರು ರುಚಿ ನೋಡಬಹುದು.
ಈ ಟೇಸ್ಟ್ ಟಿವಿಯ ಮೂಲಕ ಮನೆಯಲ್ಲೇ ಕುಳಿತು ರೆಸ್ಟೋರೆಂಟ್ ಗಳಲ್ಲಿ ತಿನ್ನುವ ಅನುಭವವನ್ನು ನೀಡುವುದಕ್ಕಾಗಿ ತಯಾರಿಸಲಾಗಿದೆ.
ಮೇಜಿ ವಿವಿಯ ಪ್ರೊಫೆಸರ್ ಹೋಮಿ ಮಿಯಾಶಿತಾ ಅವರು ಕೋವಿಡ್-19 ಸಂದರ್ಭದಲ್ಲಿ ಈ ರೀತಿಯ ತಂತ್ರಜ್ಞಾನದಿಂದಾಗಿ ಜನತೆ ಹೊರ ಪ್ರಪಂಚಕ್ಕೆ ಸುಲಭವಾಗಿ ಸೇರಿಕೊಳ್ಳಬಹುದಾಗಿದ್ದು, ಸಂವಹನ ನಡೆಸಬಹುದಾಗಿದೆ ಎಂದು ಹೇಳಿದ್ದಾರೆ.
ಮಿಯಾಶಿತ ಅವರು ಈ ಟೇಸ್ಟ್ ಟಿವಿ (ಟಿಟಿಟಿವಿ)ಯನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳ ತಂಡದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಹಾಗೇ ಈ ತಂಡವು ಆಹಾರವನ್ನು ಮತ್ತಷ್ಟು ರುಚಿಕರವಾಗಿಸುವ ಫೋರ್ಕ್ ನ್ನೂ ಕೂಡ ಅಭಿವೃದ್ಧಿಪಡಿಸಿದೆ.
ಮಿಯಾಶಿತ ಅವರು ಕಳೆದ ವರ್ಷ ಟಿಟಿಟಿವಿ ಮಾದರಿಯನ್ನು ತಮಗಾಗಿ ಸಿದ್ಧಪಡಿಸಿದ್ದರು. ಇದರ ಬೆಲೆ ಸುಮಾರು 100,000 ಯೆನ್ ಗಳಷ್ಟು ($875). ಈ ಟಿವಿಯನ್ನು ಟೇಸ್ಟಿಂಗ್ ಗೇಮ್ ಗಳು, ಕ್ವಿಜ್, ಸಮ್ಮಿಲಿಯರ್ಸ್ ಗಾಗಿ ಡಿಸ್ಟೆನ್ಸ್ ಲರ್ನಿಂಗ್ ಗೂ ಬಳಸಬಹುದಾಗಿದೆ.