ಸೌತ್ ನ ಸೂರ್ಯ ನಟಿಸಿರುವ ಜೈ ಭೀಮ್ ಹಾಗೂ ಮೋಹನ್ ಲಾಲ್ ನಟಿಸಿರುವ ಮರಕ್ಕರ್: ಅರಬಿಕದಲಿಂತೆ ಸಿಂಹಂ ಈ ಎರಡು ಸಿನೆಮಾಗಳು 2022 ಸೇ ಸಾಲಿನ ಆಸ್ಕರ್ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಯಾಗಿವೆ.
ಆಸ್ಕರ್ ಪ್ರಶಸ್ತಿಗಳನ್ನು ನೀಡುವ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್ ಈ ವರ್ಷ ಪ್ರಶಸ್ತಿಗಳಿಗೆ ಅರ್ಹವಾದ 276 ಸಿನೆಮಾಗಳ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ತಮಿಳಿನ ಜೈ ಭೀಮ್ ಮತ್ತು ಮಲಯಾಳಂನ ಮರಕ್ಕರ್ ಆಸ್ಕರ್ ಪಟ್ಟಿಯಲ್ಲಿರುವ ಎರಡು ಭಾರತೀಯ ಸಿನೆಮಾಗಳು.
ಮೂಲಗಳ ಅನುಸಾರ 94 ನೇ ಅಕಾಡೆಮಿ ಪ್ರಶಸ್ತಿಗಳಿಗೆ ಆಯ್ಕೆಯಾದ ಎಲ್ಲಾ ಸಿನೆಮಾಗಳಿಗೆ ಜನವರಿ 27 ರಂದು ಮತದಾನವು ಪ್ರಾರಂಭವಾಗುತ್ತದೆ ಹಾಗೂ ಆ ವಾರಾಂತ್ಯದಲ್ಲಿ ಕೊನೆಯಾಗುತ್ತದೆ. ಫೆಬ್ರವರಿ 8 ರಂದು ವಿಭಾಗಗಳಾದ್ಯಂತ ಅಂತಿಮ ನಾಮನಿರ್ದೇಶನಗಳನ್ನು ಪ್ರಕಟಿಸಲಾಗುತ್ತದೆ. ಮಾರ್ಚ್ 27 ರಂದು ಲಾಸ್ ಏಂಜಲೀಸ್‌ನ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದೆ.