ಉಡುಪಿ: ತೋನ್ಸೆ ಹೂಡೆಯ ಸಾಲಿಹಾತ್ ಕಾಲೇಜಿನಲ್ಲಿ ಅಪರೂಪದ ಇಲಿಯೊಂದು ಪತ್ತೆಯಾಗಿದೆ.
ಮಂಗಳವಾರ ಕಾಲೇಜಿನ ಹಾಲ್ ನಲ್ಲಿ ಓಡಾಡುತ್ತಿದ್ದ ಹಳದಿ-ಬಿಳಿ ಬಣ್ಣದ ಉದ್ದದ ಕೂದಲಿನ ಇಲಿಯನ್ನು ಕಂಡು ಶಿಕ್ಷಕರು ಆಶ್ಚರ್ಯಚಕಿತರಾಗಿದ್ದಾರೆ. ಇದೀಗ ಈ ಇಲಿಯು ಎಲ್ಲರ ಗಮನ ಸೆಳೆಯುತ್ತಿದೆ. ಈ ಇಲಿಯನ್ನು ಕಾಲೇಜಿನಲ್ಲಿ ಬಾಕ್ಸ್ ಗೆ ಹಾಕಿಡಲಾಗಿದೆ ಎಂದು ಕಾಲೇಜಿನ ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ ಹೇಳಿದ್ದಾರೆ.
ಪ್ರಾಣಿ ಶಾಸ್ತ್ರಜ್ಞರ ಪ್ರಕಾರ ಈ ಇಲಿಯು ಸಾಕು ತಳಿಯಾದ ಡೊಮೆಸ್ಟಿಕೇಟೆಡ್ ಆಗಿದ್ದು ವನ್ಯಜೀವಿಯಲ್ಲ. ಮಹಾನಗರಗಳ ಪೆಟ್‌ಶಾಪ್ಸ್‌ಗಳಲ್ಲಿ ಪಕ್ಷಿ, ಬೆಕ್ಕು, ಗಿನ್ನಿ ಪಿಗ್ಸ್ ಮಾರಾಟ ಮಾಡಲು ಸಾಕಾಣಿಕೆ ಮಾಡುವ ರೀತಿಯ ತಳಿ ಇದಾಗಿರಬಹುದೆಂದು ಎಂದಿದ್ದಾರೆ.