ಯುರೋಪಿಯನ್ ಒಕ್ಕೂಟದ ಸದಸ್ಯತ್ವ ತಮಗೂ ನೀಡಬೇಕೆಂದು ಉಕ್ರೇನ್ ಮನವಿ ಮಾಡಿತ್ತು. ಸೋಮವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒಂದು ಅರ್ಜಿ ತುಂಬಿಸಿ ಸಹಿ ಮಾಡಿದ್ದು, ಈ ಅರ್ಜಿಯನ್ನು ಪರಿಶೀಲನೆ ಮಾಡುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಇಯು ಮೂಲಗಳ ಪ್ರಕಾರ ಇಂದು ಯುರೋಪಿಯನ್ ಒಕ್ಕೂಟ ಉಕ್ರೇನ್ಗೆ ತನ್ನ ಸದಸ್ಯತ್ವ ನೀಡಲಿದೆ ಎಂದು ವರದಿಯಾಗಿದೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸಹಿ ಮಾಡಿದ ಅರ್ಜಿಯನ್ನು ಯುರೋಪಿಯನ್ ಒಕ್ಕೂಟದ ಫ್ರಾನ್ಸ್ನ ಶಾಶ್ವತ ಪ್ರತಿನಿಧಿಯಾದ ಲೆಗ್ಲಿಸ್-ಕೋಸ್ಟಾ ಅವರಿಗೆ ಹಸ್ತಾಂತರಿಸಿ, ನಂತರ ಒಕ್ಕೂಟದ ಪ್ರೆಸಿಡೆನ್ಸಿ ಆಫ್ ಕೌನ್ಸಿಲ್ ಮುಂದೆ ಮಂಡಿಸಲಾಯಿತು. ಪ್ರಸ್ತುತ ಫ್ರಾನ್ಸ್ ಈ ಕೌನ್ಸಿಲ್ ಅಧ್ಯಕ್ಷತೆ ವಹಿಸಿದ್ದು, ಅರ್ಜಿ ಪರಿಶೀಲನೆ, ಚರ್ಚೆ ಪ್ರಕ್ರಿಯೆ ಪ್ರಾರಂಭವಾಗಿದೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ವೈಯಕ್ತಿಕವಾಗಿ ಯುರೋಪಿಯನ್ ಒಕ್ಕೂಟದ ಸದಸ್ಯತ್ವ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಪ್ರಧಾನಮಂತ್ರಿ ಡಿಮಿಟ್ರೋ ಶ್ಮಿಗಲ್ ಹಾಗೂ ಸಂಸತ್ತಿನ ಮುಖ್ಯಸ್ಥ ವರ್ಕೋವ್ನಾ ರಾಡಾ ಅವರೊಂದಿಗೆ ಸೇರಿ ಜಂಟಿ ಮನವಿ ಕಳುಹಿಸಿದ್ದರು. ಸದ್ಯ ಯುರೋಪಿಯನ್ ಒಕ್ಕೂಟದಲ್ಲಿ 27 ರಾಷ್ಟ್ರಗಳಿವೆ. ರಷ್ಯಾವು ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದ್ದಂತೆ, ಯುರೋಪಿಯನ್ ಒಕ್ಕೂಟದಲ್ಲಿದ್ದ ಅನೇಕ ರಾಷ್ಟ್ರಗಳು ಉಕ್ರೇನ್ಗೆ ಇಯು ಸದಸ್ಯತ್ವ ನೀಡಬೇಕೆಂದು ಮನವಿ ಮಾಡಿದ್ದವು.