Sunday, June 8, 2025

ಒಂದೇ ಬೈಕ್‌ನಲ್ಲಿ ಐವರು ತೆರಳುತ್ತಿರುವ ವಿಡಿಯೋ ಹರಿಬಿಟ್ಟ ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ಇಲ್ಲಿನ ನಗರದ ರಸ್ತೆಯೊಂದರಲ್ಲಿ ಒಂದೇ ಬೈಕ್‌ನಲ್ಲಿ ಐವರು ತೆರಳುತ್ತಿರುವ ವಿಡಿಯೋವನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊAಡಿದ್ದಾರೆ. ಅಲ್ಲದೇ, ಮಂಗಳೂರು ನಗರ ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ಒಂದೇ ಬೈಕಿನಲ್ಲಿ ಐದು ಮಂದಿ ಕುಳಿತಿದ್ದಾರೆ. ಇಬ್ಬರು ದೊಡ್ಡವರು, ಮೂವರು ಸಣ್ಣ ಮಕ್ಕಳು. ಇದರಲ್ಲಿ ಒಂದು ಮಗು ಟ್ಯಾಂಕ್ ಮೇಲೆ ಕುಳಿತುಕೊಂಡಿದ್ದು, ಒಂದು ಮಗು ಮಲಗಿಕೊಂಡಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಚಾರದಲ್ಲಿ ಡಿಸಿಪಿ ಅಪರಾಧ ಮತ್ತು ಸಂಚಾರ ಮಂಗಳೂರು ನಗರ ಪೊಲೀಸರು ಮಧ್ಯ ಪ್ರವೇಶಿಸಬೇಕು. ಇಂತಹ ಅಪಾಯಕಾರಿ ಸವಾರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವೇದವ್ಯಾಸ ಕಾಮತ್ ಒತ್ತಾಯಿಸಿದ್ದಾರೆ

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles