ವಿಟ್ಲ: ಟಿಕ್ ಟಾಕ್ ನ ಹಾಸ್ಯ ವಿಡಿಯೋಗಳಲ್ಲಿ ನಟಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ಟಿಕ್ ಟಾಕ್ ಕಮಲಜ್ಜಿ(ಕಮಲ) ಅವರು ಅಸೌಖ್ಯದಿಂದ ಸಾವನ್ನಪ್ಪಿದ್ದಾರೆ.
ಕಮಲಜ್ಜಿ ಅವರು ಟಿಕ್ ಟಾಕ್ ಸ್ಟಾರ್ ಧನರಾಜ್ ಆಚಾರ್ಯ ಅವರೊಂದಿಗೆ 50 ಕ್ಕೂ ಅಧಿಕ ವಿಡಿಯೋಗಳಲ್ಲಿ ನಟಿಸಿದ್ದಾರೆ. ಇವರ ಕುಟುಂಬದ ಪ್ರತಿಯೊಬ್ಬರೂ ಟಿಕ್ ಟಾಕ್ ವಿಡಿಯೋದಲ್ಲಿ ನಟಿಸುತ್ತಿದ್ದ ಕಾರಣ ಟಿಕ್ ಟಾಕ್ ಫ್ಯಾಮಿಲಿ ಎಂದು ಖ್ಯಾತಿ ಪಡೆದಿತ್ತು.
ಕಮಲಜ್ಜಿ ಅವರು ತಮಗೆ ವಯಸ್ಸಾಗಿದೆ ಎಂದು ಸುಮ್ಮನೆ ಕೂರದೇ ಯುವಕರನ್ನೇ ನಾಚಿಸುವಂತೆ ಹುಮ್ಮಸ್ಸಿನಿಂದ ವಿಡಿಯೋಗಳಲ್ಲಿ ನಟನೆ ಮಾಡುತ್ತಿದ್ದರು. ಇವರು ಎಲ್ಲಾ ವಯೋವರ್ಗದ ಅಭಿಮಾನಿಗಳನ್ನು ಹೊಂದಿದ್ದರು. ಈ ಹಿಂದೆ ಕಮಲಜ್ಜಿ ಪ್ರಸೂತಿ ತಜ್ಞೆಯಾಗಿದ್ದರು. ಇವರು ಆರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.