Sunday, June 8, 2025

ವಿಶ್ವ ದಾಖಲೆಗೆ ಸಜ್ಜಾಗಿರುವ ಗೋಡೆ ಚಿತ್ರ..!

ನವದೆಹಲಿ: ಪ್ರಗತಿ ಮೈದಾನದ ಸುರಂಗದ ಗೋಡೆ ಮೇಲೆ ಸಿದ್ಧವಾಗುತ್ತಿರುವ ಸುದೀರ್ಘ ಚಿತ್ರರಚನೆ ಸದ್ಯದಲ್ಲೇ ವಿಶ್ವದಾಖಲೆ ಪಟ್ಟಿ ಸೇರಲಿದೆ.

ಪ್ರಗತಿ ಮೈದಾನದಲ್ಲಿ ನಿರ್ಮಾಣವಾಗುತ್ತಿರುವ ಗೋಡೆ ಚಿತ್ರವು 98,000 ಚದರ ಮೀಟರ್ ಇರಲಿದೆ. ಈ ಮೂಲಕ ಪ್ರಸ್ತುತ ದ.ಕೊರಿಯಾದ ವಿಶ್ವದಾಖಲೆಯನ್ನು ಮುರಿಯಲಿದೆ. ಅಲ್ಲಿನ ಗೋಡೆಚಿತ್ರವು 23,688 ಚದರ ಮೀಟರ್ ಇದೆ. ಎಲ್ಲೂ ತಡೆಯಿಲ್ಲದಂತೆ 3 ಕಿ.ಮೀ ನಿರಂತರವಾಗಿ ಚಿತ್ರರಚನೆ ಮಾಡಲಾಗಿದೆ.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಎಲ್ಲಾ ಹಬ್ಬಗಳ ಚಿತ್ರಗಳು, ಭಾರತೀಯ ಸಂಸ್ಕೃತಿ ಬಿಂಬಿಸುವ ಚಿತ್ರಗಳು, ವರ್ಷದ ಆರು ಋತುಗಳಲ್ಲಿ ಭಾರತೀಯರ ಜೀವನಶೈಲಿ, ದೆಹಲಿಯ ಸ್ಥಳೀಯ ಸಂಸ್ಕೃತಿಗಳ ಚಿತ್ರಗಳು ಗೋಡೆಯ ಮೇಲೆ ಚಿತ್ರಿಸಲಾಗುತ್ತಿದೆ. ಈಗಾಗಲೇ ಸುರಂಗ ಮಾರ್ಗದ ನಿರ್ಮಾಣ ಹಾಗೂ ಚಿತ್ರರಚನೆಯು ಶೇ.90 ರಷ್ಟು ಮುಗಿದಿದ್ದು, ಸದ್ಯದಲ್ಲೇ ವಿಶ್ವ ದಾಖಲೆ ಪಟ್ಟಿಗೆ ಸೇರಲು ಸಜ್ಜಾಗಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles