ನವದೆಹಲಿ:ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಫೀಚರೊಂದನ್ನು ನೀಡುತ್ತಿದ್ದು, ಇನ್ನು ಮುಂದೆ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಅವಶ್ಯಕತೆ ಇರದ ಸಂದೇಶ ಬಂದರೆ ಅದನ್ನು ತತ್‌ಕ್ಷಣಕ್ಕೆ ಗ್ರೂಪ್ ಅಡ್ಮಿನ್ ಡಿಲೀಟ್ ಮಾಡಬಹುದಾಗಿದೆ.
ಈ ಫಿಚರ್‌ನಲ್ಲಿ ವಾಟ್ಸ್ಆ್ಯಪ್ ಗ್ರೂಪ್‌ನ ಸದಸ್ಯರು ಆಶಯಗಳಿಗೆ ವಿರುದ್ಧವಾಗಿ ಪೋಸ್ಟ್ ಹಾಕಿದರೆ ಆ ಸಂದೇಶವನ್ನು ಹಾಕಿದ ಗ್ರೂಪ್‌ನ ಸದಸ್ಯನ ಅನುಮತಿಗೆ ಕಾಯದೇ ಅದನ್ನು ಡಿಲೀಟ್ ಮಾಡುವ ಅವಕಾಶ ಗ್ರೂಪ್‌ನ ಅಡ್ಮಿನ್‌ಗೆ ಲಭ್ಯವಾಗಲಿದೆ. ಹಾಗೆ ಡಿಲೀಟ್ ಆಗುವ ಸಂದೇಶವನ್ನು ಡಿಲೀಟ್ ಬೈ ಅಡ್ಮಿನ್ ಎಂದು ತೋರಿಸಲಾಗುವುದು. ಆ ಗ್ರೂಪ್‌ನಲ್ಲಿ ಒಂದಕ್ಕಿಂತ ಹೆಚ್ಚು ಅಡ್ಮಿನ್‌ಗಳಿದ್ದರೆ, ಯಾವ ಅಡ್ಮಿನ್ ಡಿಲೀಟ್ ಮಾಡಿದ್ದಾರೆ ಎನ್ನುವುದನ್ನೂ ಕೂಡ ತೋರಿಸಲಾಗುವುದು.
ಇನ್ನು, ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಸದ್ಯದಲ್ಲೇ ಡಿಲೀಟ್ ಫಾರ್ ಎವರಿವನ್ ಆಯ್ಕೆಯ ಸಮಯಾವಕಾಶವನ್ನು 7ದಿನ, 8ನಿಮಿಷಕ್ಕೆ ಏರಿಸಲಾಗುವುದು ಎಂದು ಡಬ್ಲ್ಯೂ(WABetaInfo) ಇನ್ಫೂ ಟ್ವೀಟ್ ಮಾಡಿದೆ. ಇದರೊಂದಿಗೆ ಫೋಟೋ/ವೀಡಿಯೊ ಸೇರಿ ಹಲವು ಮೀಡಿಯಾ ಫೈಲ್ ಕಳುಹಿಸಲು ಅನುಕೂಲವಾಗುವಂತೆಯೂ ವಾಟ್ಸ್ಆ್ಯಪ್ ನಲ್ಲಿ ಮರುವಿನ್ಯಾಸಗೊಳಿಸಲಾಗಿದೆ.