ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಆಟ, ಕಾದಾಟ ಹೀಗೆ ಹಲವಾರು ವೀಡಿಯೋಗಳು ದಿನನಿತ್ಯ ಶೇರ್ ಆಗುತ್ತಲೇ ಇರುತ್ತವೆ. ಇದರಲ್ಲಿ ಕೆಲವೇ ಕೆಲವು ವಿಡಿಯೋಗಳು ಸಖತ್ ವೈರಲ್ ಆಗುತ್ತವೆ. ಹೀಗೆ ವೈರಲ್ ಆದ ವೀಡಿಯೋದಲ್ಲಿ ನಾಯಿ ಹಾಗೂ ಕಪ್ಪೆ ಕಾಳಗದ ವೀಡಿಯೋ ಕೂಡ ಒಂದು.
ಈ ವೀಡಿಯೋದಲ್ಲಿ ಕಪ್ಪೆಯು ಕಾಲು ಕೆರೆದು ನಾಯಿಯೊಂದಿಗೆ ಜಗಳಕ್ಕೆ ಹೋಗುತ್ತಿದ್ದು, ನಾಯಿಯನ್ನು ನಿಂತಲ್ಲಿ ನಿಲ್ಲಲು ಬಿಡದೆ, ಕೂತಲ್ಲಿ ಕೂರಲು ಬಿಡದೇ ಕಾಟ ಕೊಡುತ್ತಲೇ ಇರುತ್ತದೆ. ನಾಯಿ ಪಾಡು ನೋಡಿ ನಗು ಬಂದರೂ ಸಣ್ಣ ಕಪ್ಪೆಯ ಧೈರ್ಯವು ಅಚ್ಚರಿ ಮೂಡಿಸುವುದಂತೂ ಸುಳ್ಳಲ್ಲ.
ಮೊದ ಮೊದಲು ನಾಯಿ ಕಪ್ಪೆಯ ಮೇಲೆ ದಾಳಿ ಮಾಡುತ್ತದೆ. ಆದರೆ ಕಪ್ಪೆಯು ಕೊಂಚವೂ ಹೆದರದೆ ನಾಯಿಯ ಮುಖದ ಮೇಲೆಯೇ ಹಾರಲು ಪ್ರಾರಂಭಿಸುತ್ತದೆ. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಈ ವೀಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋ ಜೊತೆ ನಾಯಿಗೆ ಕಾಟ ಕೊಡುತ್ತಿರುವ ಕಪ್ಪೆ ಎಂದು ಬರೆದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದ್ದು, ಕಪ್ಪೆಯ ಧೈರ್ಯವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.
😂😂😂😂