ಮಧ್ಯಪ್ರದೇಶ: ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಮಧ್ಯಪ್ರದೇಶದ ಇಂದೋರ್ನ ದೇವಿ ಅಹಿಲ್ಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಂಗೋಲಿ ಬಿಡಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಕಲಾವಿದೆ ಶಿಖಾ ಶರ್ಮ ಹಾಗೂ ಅವರ 20 ವಿದ್ಯಾರ್ಥಿಗಳು ಸೇರಿ 12 ಸಾವಿರ ಚದರ ಅಡಿಯ ರಂಗೋಲಿ ಬಿಡಿಸಿ ವಿಶ್ವ ದಾಖಲೆ ಮಾಡಿದ್ದಾರೆ. ಕೇವಲ 2 ದಿನಗಳಲ್ಲಿ ಈ ರಂಗೋಲಿ ಬಿಡಿಸಿದ್ದಾರೆ. ಈ ರಂಗೋಲಿಯು ಮಹಿಳಾ ಸಬಲೀಕರಣ ಪ್ರತಿನಿಧಿಸುತ್ತದೆ.


ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಲಾಗಿದೆ. ಹಾರ್ನಜ್ ಕೌರ್ ಸಂಧು, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಕಲ್ಪನಾ ಚಾವ್ಲಾ, ನೇಹಾ ಕಕ್ಕರ್, ಅಹಿಲ್ಯ ದೇವಿ ಹಾಗೂ ಸ್ವಚ್ಛ ಭಾರತ್ ಅಭಿಯಾನವನ್ನು ಪ್ರತಿನಿಧಿಸುವ ಮಹಿಳೆಯರ ಚಿತ್ರವು ಈ ರಂಗೋಲಿಯಲ್ಲಿ ಮೂಡಿಬಂದಿದೆ.