ಯಾದಗಿರಿ: ಸಾಮಾನ್ಯವಾಗಿ ನಾವು ನಮ್ಮ ಮನೆಯವರ ಸ್ನೇಹಿತರ ಹುಟ್ಟುಹಬ್ಬವನ್ನು ಆಚರಿಸುತ್ತೇವೆ. ಆದರೆ ಇಲ್ಲೊಬ್ಬ ಯುವಕ ತಾನು ಸಾಕಿದ ಹುಂಜದ ಹುಟ್ಟುಹಬ್ಬ ಆಚರಿಸಿದ್ದಾನೆ.
ಯಾದಗಿರಿಯ ಸುರಪುರ ಪಟ್ಟಣದ ಹಣಮಂತ ಎಂಬ ಯುವಕ ತನ್ನ ನೆಚ್ಚಿನ ಹುಂಜ ಬ್ಲೇಡ್ ನಾಗನ ಮೂರನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಹುಂಜಕ್ಕೆ ಹೂ ಮಾಲೆ, ಶಾಲು ಹೊದಿಸಿ ಕೇಕ್ ಕತ್ತರಿಸಿ ಜನ್ಮ ದಿನ ಆಚರಿಸಿದ್ದು, ತನ್ನ ಸ್ನೇಹಿತರಿಗೆ ಔತಣಕೂಟ ಏರ್ಪಡಿಸಿದ್ದಾರೆ.
ಹಣಮಂತ ಚಿಕ್ಕದೊಂದು ಪಾನ್ ಶಾಪ್ ನಡೆಸುವುದರ ಜೊತೆಗೆ ಕೋಳಿ, ಪಾರಿವಾಳ ಹಾಗೂ ಜಾನುವಾರು ಸಾಕಾಣಿಕೆ ಮಾಡುತ್ತಿದ್ದಾರೆ. ಇವರು ತನ್ನ ಬಳಿ ಇರುವ ಹುಂಜಗಳಿಗೆ ಬ್ಲೇಡ್ ನಾಗ, ದಳವಾಯಿ, ಬೆಂಕಿ ದೊರಿ ಹಾಗೂ ಬೈರಾ ಎಂದು ಹೆಸರಿಟ್ಟಿದ್ದಾರೆ. ಅವರು ಪ್ರತಿ ವರ್ಷ ಹುಂಜಗಳ ಹುಟ್ಟುಹಬ್ಬ ಸರಳವಾಗಿ ಆಚರಿಸುತ್ತಿದ್ದು, ಈ ಬಾರಿ ಮಾತ್ರ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ.