ವಿರಾಜಪೇಟೆ: ತೋಟವೊಂದರಲ್ಲಿ ಕಾಳು ಮೆಣಸು ಕುಯ್ಯಲು ಬಂದ ಕಾರ್ಮಿಕನ ಮೇಲೆ ಹುಲಿ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕಂಡಂಗಾಲ ಒಂದನೇ ರುದ್ರಗುಪ್ಪೆಯಲ್ಲಿ ನಡೆದಿದೆ.
ಹುಲಿ ದಾಳಿಗೆ ಬಲಿಯಾದ ವ್ಯಕ್ತಿಯನ್ನು ಕೊಂಗಂಡ ಗಣಪತಿ ಅಯ್ಯಪ್ಪ ಎಂಬುವವರ ಕಾಫಿ ತೊಟದ ಕಾರ್ಮಿಕ ಗಣೇಶ್ ಪುಟ್ಟು (29) ಎಂದು ಗುರುತಿಸಲಾಗಿದೆ. ಈ ಭಾಗದಲ್ಲಿ ಕೆಲವು ತಿಂಗಳ ಹಿಂದೆ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿತ್ತು. ಇದೀಗ ಆ ಘಟನೆ ಮಾಸುವ ಮುನ್ನವೇ ಹುಲಿ ದಾಳಿಗೆ ಕಾರ್ಮಿಕನೊರ್ವ ಮೃತನಾಗಿದ್ದಾನೆ.
ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ಸಂಬಂಧಿಸಿದ ಇಲಾಖೆಯವರು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.